ಎ.15, 16 ಹಾಗೂ 17 ಶಿರಸಿ ಯಚಡಿ ಶ್ರೀ ರಾಮಲಿಂಗೇಶ್ವರ ದೇವರ ಪುನರ್ ಪ್ರತಿಷ್ಠಾಪನ, ಅಷ್ಟಬಂಧ ಮಹೋತ್ಸವ
ಶಿರಸಿ: ದೀವಗಿಯ ಶ್ರೀ ರಾಮಾನಂದ ಸ್ವಾಮೀಜಿ ಸ್ಮರಣೆ ಹಾಗೂ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ತಾಲೂಕಿನ ಯಚಡಿಯ ಶ್ರೀ ರಾಮಲಿಂಗೇಶ್ವರ ದೇವರ ಪುನರ್‌ಪ್ರತಿಷ್ಠಾಪನ ಅಷ್ಟಬಂಧ ಮಹೋತ್ಸವ ಎ.15, 16 ಹಾಗೂ 17 ರಂದು ಜರುಗಲಿದೆ.
ವೇದಮೂರ್ತಿ ಗಣಪತಿ ಹಿರೇಭಟ್ಟ ಗೋಕರ್ಣ ಮಾರ್ಗದರ್ಶನದಲ್ಲಿ ಎ.15 ರಂದು ಬೆಳಿಗ್ಗೆ ಬ್ರಹ್ಮಕೂರ್ಚಹವನ, ಪ್ರಾರ್ಥನೆ, ಮಹಾಸಂಕಲ್ಪ, ಗಣಪತಿಪೂಜಾ, ಪುಣ್ಯಾಹ, ನಾಂದಿ, ಕೌತುಕಪೂಜಾ, ಕೃಚ್ಛಾಚರಣ, ಋತ್ವಿಡ್ವರ್ಣನಂ, ಮಧುಪರ್ಕ, ಕೌತುಕಬಂಧನ, ಅಷ್ಟಮೂರ್ತಿ ಪ್ರಾರ್ಥನಾ, ಬಿಂಬಶುದ್ಧಿ, ಜಲಾಧಿವಾಸ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಾಯಂಕಾಲ ಯಾಗಶಾಲಾ ಪ್ರವೇಶ, ಸಪ್ತಶುದ್ದಿ, ಪ್ರಾಸಾದ ಶುದ್ದಿ, ಮಂಟಪ ಸಂಸ್ಕಾರ, ಮಂಡಲ ದರ್ಶನ, ರಾಕ್ಷೆಪ್ಪ, ವಾಸ್ತುಶಾಂತಿ, ಕುಂಭೇಶಕಲಶ ಪೂರ್ವಾಂಗ ಹವನಗಳು, ವಾಸ್ತುಬಲಿ, ರಾತ್ರಿ ಆಹ್ವಾನಿತ ವಿಶೇಷ ತಂಡದಿಂದ ಭಜನಾ ಕಾರ್ಯಕ್ರಮ. ಎ.16 ರಂದು ಬೆಳಿಗ್ಗೆ ಗಣಪತಿಪೂಜಾ, ಪುಣ್ಯಾಹ, ಕಲಶಪೂಜಾ, ನವಗ್ರಹ ಹವನ, ನಾಗಶುದ್ದಿ ಹವನ, 10 ಗಂಟೆಗೆ ಶ್ರೀ ರಾಮಲಿಂಗೇಶ್ವರ ದೇವರ ಅಷ್ಟಬಂಧ ಮಹೋತ್ಸವ, ಕಲಾವೃದ್ಧಿ ಹವನ, ಶಿಖರಪ್ರತಿಷ್ಠಾಪನೆ, ಧ್ವಜಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ, ಸಾಯಂಕಾಲ ಶಾಂತಿಪಾಠ, ಕಲಾ, ತತ್ವ ನ್ಯಾಸ ಷಡಧ್ವ ನ್ಯಾಸ, ಪ್ರಾಕಾರ ಬಲಿ, ರಾಜೋಪಚಾರ ಸೇವೆ, ರಾತ್ರಿ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು. ಎ.17 ರಂದು ಬೆಳಿಗ್ಗೆ ಗಣಪತಿಪೂಜಾ, ಪುಣ್ಯಾಹ, ಕಲಶಪೂಜಾ, ಪೂಜಾಹವನ ಶಾಂತಿ ಪ್ರಾಯಶ್ಚಿತ್ತಾದಿ ಹವನಗಳು, ಶತರುದ್ರಹವನ, ಪೂರ್ಣಾಹುತಿ, ಪೂರ್ಣ ಕಲಾ ಸಾನ್ನಿಧ್ಯ ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಮತ್ತು ರಾತ್ರಿ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. 8 ಘಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ದೇವರಿಗೆ ಪೂಜೆ ಸಲ್ಲಿಸಿದ ಕೆಲ ಭಕ್ತರಿಗೆ ಸನ್ಮಾನ ನೆರವೇರಿಸಲಾಗುವುದು. ರಾತ್ರಿ 10. 30 ರಿಂದ ಅತಿಥಿ ಕಲಾವಿದರ ಕೂಡುವಿಕೆಯಿಂದ 'ರಾಜಾ ರುದ್ರಕೋಪ' ಮತ್ತು 'ಮೀನಾಕ್ಷಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಣ್ಣ ಭಾಗವತ ಯಲ್ಲಾಪುರ, ಮದ್ದಲೆಯಲ್ಲಿ ವಿಠಲ ಪೂಜಾರಿ ಮಂಚಿಕೇರಿ, ಚಂಡೆಯಲ್ಲಿ ಗಂಗಾಧರ ಹೆಗಡೆ ಕಂಚಿಮನೆ, ಸ್ತ್ರೀವೇಷದಲ್ಲಿ ಸದಾನಂದ ಪಟಗಾರ ಕುಮಟಾ, ಶಿವು ಶಿರಳಗಿ, ಹಾಸ್ಯದಲ್ಲಿ ಗುಂಡು ಪೂಜಾರಿ ಹೊಸನಗರ, ಮುಮ್ಮೇಳದಲ್ಲಿ ರಘುಪತಿ ನಾಯ್ಕ ಹೆಗ್ಗರಣಿ, ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ, ಮಂಜುನಾಥ ಶೆಟ್ಟಿ, ಮಾಲ್ಲೇಶ್ವರ ನಾಯ್ಕ ಕುಮಟಾ, ಎಂ.ಟಿ.ಗೌಡ ಅರೆಹಳ್ಳ. ಈಶ್ವರ ಭಟ್ಟ ತೆಪ್ಪಿಗೆ ಪಾಲ್ಗೊಳ್ಳಲಿದ್ದಾರೆ.
0 Comments