ಶಿರಸಿ: ಸಂಸ್ಕಾರ ಭಾರತಿ ಉತ್ತರ ಕನ್ನಡ ಆಶ್ರಯದಲ್ಲಿ ಭರತಮುನಿ ಸಂಸ್ಮರಣ ಉಪನ್ಯಾಸ-ಸಂಗೀತ-ಭರತನಾಟ್ಯ ಕಾರ್ಯಕ್ರಮ ಸಂಜೆ 4:30 ರಿಂದ 7 ಗಂಟೆವರೆಗೆ "ಸುಕರ್ಮ" ಯಾಗಶಾಲೆ ಯಡಳ್ಳಿ ಶಿರಸಿಯಲ್ಲಿ ಜರುಗಲಿದೆ. ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ನಿರ್ನಳ್ಳಿ ರಾಮಕೃಷ್ಣ ಸಂಸ್ಕಾರ ಭಾರತಿ ಉತ್ತರ ಕನ್ನಡ ಅಧ್ಯಕ್ಷರು, ಪ್ರಸಿದ್ಧ ಚಲನಚಿತ್ರ ನಟರು ವಹಿಸಲಿದ್ದಾರೆ.
ವಕ್ತಾರರಾಗಿ "ವಿದ್ಯಾವಾಚಸ್ಪತಿ" ವಿದ್ವಾನ್ ಉಮಾಕಾಂತ್ ಭಟ್ ಕೆರೇಕೈ ಪ್ರಸಿದ್ಧ ಯಕ್ಷಗಾನ ಕಲಾವಿದರು ಆಗಮಿಸಲಿದ್ದಾರೆ. ಸಂಗೀತ ಪಂಡಿತ್ ಎಂ.ಪಿ. ಹೆಗಡೆ ಪಡಿಗೆರೆ ಗಾಯನ ಪ್ರಾ || ಶ್ರೀ ಸಾಯಿ ಸಂಗೀತ ವಿದ್ಯಾಲಯ ಶಿರಸಿ ಭರತನಾಟ್ಯ ವಿದೋಷಿ ಸೀಮಾ ಭಾಗವತ್ ಸಂಯೋಜನೆಯಲ್ಲಿ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಹಕಾರ ಸುಕರ್ಮ ಯಾಗಶಾಲೆ, ಅರಿವು ವೇದಿಕೆ ಯಡಳ್ಳಿ ನೀಡಲಿದೆ.
0 Comments