Hot Posts

6/recent/ticker-posts

ರೇವಣಕಟ್ಟಾ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸಹಸ್ರಾಧಿಕ (1008) 'ನಾಲಿಕೇರ ಗಣಹವನ’

ಶಿರಸಿ: ಲೋಕಕಲ್ಯಾಣಾರ್ಥವಾಗಿ ಶ್ರೀದೇವರ ಪ್ರೇರಣೆಯಂತೆ ಸಹಸ್ರಾದಿಕ(1008) ನಾಲಿಕೇರ ಮಹಾಗಣಪತಿಹವನವನ್ನು ಶಿರಸಿ ರೇವಣಕಟ್ಟಾದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿಸಲು ಸಂಕಲ್ಪಿಸಲಾಗಿದೆ. ಸರ್ವಾಭೀಷ್ಟದಾಯಕವಾದ ಈ ಮಹಾನುಷ್ಠಾನವು ಕ್ರೋಧಿ ಸಂ||ದ ಮಾಘ ಕೃಷ್ಣ ಪಂಚಮೀ ಸೋಮವಾರ ದಿನಾಂಕ 17-02-2025 ರಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದೊಂದಿಗೆ ಗ್ರಾಮದ ಹಾಗೂ ಸಮಸ್ತ ಭಕ್ತ-ವೈದಿಕ ಸಮೂಹದ ಸೇವಾಸಹಕಾರದೊಂದಿಗೆ ನಡೆಯಲಿದೆ. 

ಕಾರ್ಯಕ್ರಮ ವಿವರ

ಸೋಮವಾರ ದಿನಾಂಕ 17-02-2025 ಪ್ರಾತಃ : ಶ್ರೀ ಗಣಪತಿ ಪ್ರಾರ್ಥನೆ, ಮಧುಪರ್ಕ, ಋತ್ವಿಗರ್ಣನೆ, ನಾಲಿಕೇರಗಣಹವನ, 12-00ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ವಿಪ್ರಾಶೀರ್ವಾದ, ಮಹಾಸಂತರ್ಪಣೆ. ಮಧ್ಯಾಹ್ನ 3-30ಕ್ಕೆ ಧರ್ಮಸಭೆ ಶ್ರೀಗುರುಪಾದುಕಾ ಪೂಜೆ-ಆಶೀರ್ವಚನ ದಿವ್ಯಸಾನ್ನಿಧ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ

ಭಕ್ತ ಮಹಾಜನರು ಸೇವೆ ಸಲ್ಲಿಸಲು ಅವಕಾಶವಿದ್ದು 

ಸೇವಾ ದೇಣಿಗೆ ರೂಪಾಯಿ 1010, ವಿಶೇಷ ದಾನಿ ರೂ.3000 ರೂ.5000 ಮಹಾದಾನಿ ರೂ 10,000 ಪಾವತಿಸುವದರ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆ ವಸಂತ ತಿ. ಹೆಗಡೆ, ಸಿರೀಕುಳಿ 9481915777 ರಾಮಚಂದ್ರ ಭಟ್ಟ, ರೇವಣಕಟ್ಟಾ 9481599051 (ಅರ್ಚಕರು) ನಾರಾಯಣ ಭಟ್ಟ, ಬಳ್ಳಿ, ಮಾನಸಗಿ 8431776854

ಪ್ರತಿಕ್ರಿಯೆ

Post a Comment

0 Comments