Hot Posts

6/recent/ticker-posts

ಶಿರಸಿ ಶ್ರೀ ಮರ್ಕಿ-ದುರ್ಗಿ ದೇವಿಯ ವರ್ಧಂತಿ ಉತ್ಸವ

ಶಿರಸಿ: ದಿನಾಂಕ: 09-02-2025 ರಂದು ಶ್ರೀ ಮಾರಿಕಾಂಬಾ ದೇವಸ್ಥಾನ ಸುಪರ್ದಿಗೊಳಪಟ್ಟ ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿ ಶ್ರೀ ಮರ್ಕಿ-ದುರ್ಗಿ ದೇವಿಯ ವರ್ಧಂತಿ ಪ್ರಯುಕ್ತ ದಿನಾಂಕ: 09-02-2025 ರಂದು ರವಿವಾರದಂದು "ದುರ್ಗಾಶಾಂತಿ ಹವನ" ಸೇವೆ ನಡೆಯಲಿದ್ದು, ಅಂದು ಬೆಳಿಗ್ಗೆ 10 ಘಂಟೆಗೆ ಸಾಮೂಹಿಕ ಸಂಕಲ್ಪದೊಂದಿಗೆ ಆರಂಭಗೊಳ್ಳುವ ಪೂಜಾ ವಿಧಾನಗಳು ಮಧ್ಯಾಹ್ನ 12-15 ಕ್ಕೆ ನಡೆಯುವ ಪೂರ್ಣಾಹುತಿಯೊಂದಿಗೆ ಪೂರ್ತಿಗೊಳ್ಳಲಿದೆ. ತದನಂತರ ಮಹಾ ಮಂಗಳಾರತಿ ಯೊಂದಿಗೆ ಪ್ರಸಾದ ವಿತರಣೆ ಇರಲಿದೆ ಭಕ್ತಾದಿಗಳು ರೂ. 100-00 ಕಾಣಿಕೆಯನ್ನು ಸಲ್ಲಿಸಿ ರಶೀದಿ ಪಡೆದಲ್ಲಿ ಹವನದ ಪೂರ್ಣಾಹುತಿಯ ವೇಳೆಗೆ ಅವರ ಹೆಸರಿನಲ್ಲಿ ವೈದಿಕರಿಂದ ಸಂಕಲ್ಪ ಮಾಡಿಸಿ ಪ್ರಸಾದ ವಿತರಿಸಲಾಗುವುದು ಎಂದು ತಿಳಿಸಲಾಗಿದೆ ಶ್ರದ್ಧಾಭಕ್ತಿಗಳಿಂದ ನಡೆಯುವ ವರ್ಧಂತಿ ಉತ್ಸವದಲ್ಲಿ ಶ್ರೀ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಲು ಕೋರಿದೆ.

ಪ್ರತಿಕ್ರಿಯೆ

Post a Comment

0 Comments