Hot Posts

6/recent/ticker-posts

ಫೆಬ್ರವರಿ.28 ರಿಂದ ಮಾ.3 ಚಂದಗುಳಿ ಘಂಟೆ ಗಣಪನ ಪ್ರತಿಷ್ಠಾ ಮಹೋತ್ಸವ

ಯಲ್ಲಾಪುರ: ನಾಡಿನ ಪ್ರಸಿದ್ಧ ಚಂದಗುಳಿಯ ಶ್ರೀ ಸಿದ್ಧಿವಿನಾಯಕ (ಘಂಟೆ ಗಣಪತಿ) ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಫೆ.28 ರಿಂದ ಮಾ.3 ರವರೆಗೆ ನಡೆಯಲಿದೆ. ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಲಿದ್ದು, ನಾಡಿನ ಖ್ಯಾತ ನಾಮರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಅಧ್ಯಕ್ಷ, ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ವಿ.ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ತಿಳಿಸಿದ್ದಾರೆ.

ರಾಜರ ಕುಟುಂಬದ ಮಗುವಿಗೆ ನಾಲಿಗೆಯಲ್ಲಿ ಶುದ್ಧ ಅಕ್ಷರ ಹೊರಡದ ಕಾರಣ ಚಂದಗುಳಿಯ ಸಿದ್ದಿವಿನಾಯಕನಲ್ಲಿ ಘಂಟೆ ಹರಕೆ ನೀಡಿದ ಪರಿಣಾಮ ಆ ಬಾಲಕನಿಗೆ ಮಾತು ಬಂತೆಂಬ ಪ್ರತೀತಿಯಿರುವ ಈ ದೇವಾಲಯ ಇತ್ತೀಚಿನ ವರ್ಷಗಳಲ್ಲಿ ಘಂಟೆ ಗಣಪನೆಂದು ಪ್ರಸಿದ್ದಿಯಾಗಿದೆ. ಪ್ರಾಚೀನ ಉಲ್ಲೇಖದಂತೆ ಸೋದೆ. ನಂತರ ಕಾಲಕ್ರಮೇಣ ಅನೇಕ ಭಕ್ತರು ತಮ್ಮಿಷ್ಟ ಈಡೇರಿಕೆಗಾಗಿ ಇಂದಿಗೂ ಗಂಟೆಯನ್ನು ಹರಕೆ ಹೇಳಿಕೊಳ್ಳುವ ಪದ್ಧತಿ ಇದೆ. 1979 ರಲ್ಲಿ ನೂತನವಾಗಿ ನಿರ್ಮಿಸಿದ ಗುಡಿ ಸಮರ್ಪಣೆ ಸ್ವರ್ಣವಲ್ಲಿಯ ಸರ್ವಜೇಂದ್ರ ಸರಸ್ವತೀ ಸ್ವಾಮಿಗಳ ಸಾನ್ನಿಧ್ಯದಲ್ಲಿ ನೆರವೇರಿತು ಹಾಗೂ 1995 ರಲ್ಲಿ ಇಂದಿನ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಅಮೃತಹಸ್ತದಲ್ಲಿ ಶಿಖರ ಪ್ರತಿಷ್ಠಾಪನೆ ನೆರವೇರಿತು. ಆದರೆ ಶಾಸ್ರೋಕ್ತವಾಗಿ ಕಟ್ಟಡ ನಿರ್ಮಾಣ ಮಾಡಬೇಕೆಂಬ ಶ್ರೀಗಳ ನಿರ್ದೇಶನದಂತೆ ನಾವು ಹಲವು ವರ್ಷಗಳಿಂದ ಕಟ್ಟಡ ನಿರ್ಮಿಸಿ, ಇಂದಿಗೆ ಪೂರ್ತಿಗೊಳಿಸುತ್ತಿದ್ದೇವೆ. ರಾಜ್ಯದ ಅನೇಕ ದಾನಿಗಳು, ಭಕ್ತರು ಸುಮಾರು 4 ಕೋಟಿ ರೂ.ಗಳನ್ನು ಈ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಸುಂದರ ಸಭಾಭವನ, ಚಂದ್ರಶಾಲೆ, ಗುರುಭವನ, ಯಾಗಶಾಲೆ ಇವುಗಳನ್ನು ಈಗ ನಿರ್ಮಿಸಲಾಗಿದೆ.

ನೂತನ ದೇವಾಲಯದಲ್ಲಿ ಶ್ರೀ ಸಿದ್ದಿವಿನಾಯಕ ದೇವರ ಮೂರ್ತಿಯ ಅಷ್ಟಬಂಧ ಮಹೋತ್ಸವ, ಶಿಖರಪ್ರತಿಷ್ಠೆ, ಧ್ವಜಪ್ರತಿಷ್ಠೆ, ಚತುದ್ರ್ರವ್ಯಾತ್ಮಕ ಗಣಪತಿ ಅಥರ್ವಶೀರ್ಷ ಹವನ, ಬ್ರಹ್ಮಕಲಶಾಭಿಷೇಕ, ಕೃಷ್ಣ ಯಜುರ್ವೇದ ಪಾರಾಯಣ, ಯಾಗಶಾಲೆ ಹಾಗೂ ಗುರುಭವನದ ಲೋಕಾರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ನಿಶ್ಚಯಿಸಲಾಗಿದೆ. 

ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿದ್ದು ವಿವರ ಇಂತಿದೆ ದಿನಾಂಕ : 28/2/2025, ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ 4 ರವರೆಗೆ ಪ್ರವಚನ ವಿ॥ ಹಿರಣ್ಯವೆಂಕಟೇಶ ಭಟ್ಟ ಇವರಿಂದ ಸಂಜೆ 4.30 ರಿಂದ 6.30 ರವರೆಗೆ ತಾಳಮದ್ದಳೆ ಡಾ॥ ಪ್ರಭಾಕರ ಜೋಶಿ ಹಾಗೂ ಸಹಕಲಾವಿದರಿಂದ ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರ ಇವರ ಪ್ರಾಯೋಜಕತ್ವದಲ್ಲಿ ಜರುಗಲಿದೆ. ದಿನಾಂಕ : 1/3/2025, ಶನಿವಾರ ಬೆಳಿಗ್ಗೆ 10 ರಿಂದ ಭಜನೆ, ಮಧ್ಯಾಹ್ನ 3 ರಿಂದ ಮಾತೃಮಂಡಳ ಹಲಸ್ಕಂಡ ಇವರಿಂದ ಹರಿಕಥೆ ಕೀರ್ತನಚತುರ ನಾರಾಯಣ ದಾಸರು ಶಿರಸಿ ಇವರಿಂದ ನಡೆಯಲಿದೆ.
ಸಂಜೆ 5 ರಿಂದ ಭಕ್ತಿ ಸಂಗೀತ ಖ್ಯಾತ ಕಲಾವಿದರುಗಳಿಂದ ಗಣೇಶ ಗುಂಡ್ಕಲ್ ಇವರ ನಿರ್ದೇಶನದಲ್ಲಿ ದಿನಾಂಕ : 2/3/2025, ಭಾನುವಾರ ಬೆಳಿಗ್ಗೆ 9 ರಿಂದ ಸಮಗ್ರ ಭಗವದ್ಗೀತಾಪಠಣ ಮಾತೃಮಂಡಳದವರಿಂದ ಇರಲಿದೆ ಸಭಾಕಾರ್ಯಕ್ರಮ ಇದ್ದು ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರ್ಣವಲ್ಲೀ ಮಠ ಇವರುಗಳ ದಿವ್ಯ ಸಾನ್ನಿಧ್ಯ ಶ್ರೀ ಬೃಹ್ಮಾನಂದ ಭಾರತೀ ಸ್ವಾಮಿಗಳು, ಶ್ರೀ ರಾಜಾರಾಮ ಆಶ್ರಮ ಶಿರಳಗಿ ಸಿದ್ದಾಪುರ ಉಪಸ್ಥಿತಿ ಇರಲಿದೆ.

ಎಸ್. ಎಮ್, ಹೆಬ್ಬಾರ ಅರಬೈಲ್, ಶಾಸಕರು ಅಷ್ಟಬಂಧ ಸಮೀತಿ ಗೌರವಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ, ಕೆನರಾ ಕ್ಷೇತ್ರದ ಸಂಸದರು ಆರ್. ವಿ. ದೇಶಪಾಂಡೆ, ಶಾಸಕರು ಹಳಿಯಾಳ ಕ್ಷೇತ್ರ, ಎಚ್. ಕೆ. ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಕರ್ನಾಟಕ ಸರಕಾರ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿ ಕ್ಷೇತ್ರದ ಸಂಸದರು ವಿ. ಎಸ್. ಪಾಟೀಲ, ಮಾಜಿ ಶಾಸಕರು ಎಂ. ಎನ್. ಎಚ್. ಸಾಗರ ಅಡಿಕೆ ವರ್ತಕರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. 

ಧಾರ್ಮಿಕ ಕಾರ್ಯಕ್ರಮಗಳು ಹೀಗಿದೆ 
ಫಾಲ್ಗುಣ ಶುದ್ಧ ಪ್ರತಿಪದೆ ಶುಕ್ರವಾರ ದಿನಾಂಕ : 28/2/2025

ಪ್ರಾತಃ ಬ್ರಹ್ಮಕೂರ್ಚಹವನ, ಪ್ರಾರ್ಥನೆ, ಮಹಾಸಂಕಲ್ಪ, ಗಣೇಶ ಪೂಜಾ, ಪುಣ್ಯಾಹ, ನಾಂದಿ, ಕೌತುಕ ಪೂಜಾ, ಕೃಚ್ಛಾಚರಣೆ, ಋತ್ವಿಗ್ವರಣ, ಮಧುಪರ್ಕ, ಕೌತುಕ ಬಂಧನ, ಅಷ್ಟಮೂರ್ತಿ ಪ್ರಾರ್ಥನಾ, ದೇವಾಲಯ ಪರಿಗೃಹ, ಶಿಖರ ಹಾಗೂ ಧ್ವಜಕ್ಕೆ ಜಲಾಧಿವಾಸ, ಗಾಯತ್ರಿ ಹವನ, ನಾಲ್ಕುಕಾಯಿ ಗಣಹವನ ಇತ್ಯಾದಿ.

ಸಾಯಂಕಾಲ: ಯಾಗಶಾಲಾ ಯಾಗಶಾಲಾ ಪ್ರವೇಶ, ಪ್ರವೇಶ, ಸ್ಥಾನ ಸ್ಥಾನ ಶುದ್ಧಿ, ಶುದ್ಧಿ, ಪ್ರಸಾದ ಶುದ್ಧಿ, ಉದಕಶಾಂತಿ, ರಾಕ್ಟೋಘ್ನ ಪಾರಾಯಣೆ, ಮಂಟಪ ಸಂಸ್ಕಾರ, ಮಂಡಲ ದರ್ಶನ, ಕುಂಭೇಶ ಕಲಶ ಸ್ಥಾಪನೆ, ರಾಕ್ಟೋಘ್ನ ವಾಸ್ತು ಶಾಂತಿ, ಅಗ್ನಿಜನನ, ಅಗ್ನಿ ಸಂಸ್ಕಾರ ಹವನಗಳು, ವಾಸ್ತು ಬಲಿ ಇತ್ಯಾದಿ.
ಫಾಲ್ಗುಣ ಶುದ್ಧ ದ್ವಿತೀಯ ಶನಿವಾರ ದಿನಾಂಕ : 1/3/2025

ಪ್ರಾತಃ ಗಣೇಶ ಪೂಜಾ, ಪುಣ್ಯಾಹ, ಕಲಶಪೂಜಾ, ಪೂಜಾಹವನ, ನಿತ್ಯಹವನ, ಸ್ಥಾನ ಶುದ್ಧಿಹವನ, ಬಿಂಬಶುದ್ದಿ ಹವನ, ನವಗ್ರಹ ಹವನ, ಮೃತ್ಯಂಜಯಶಾಂತಿ, ಪ್ರಾಯಶ್ಚಿತ್ತ ಅಧಿವಾಸ ಹವನಗಳು, ಪ್ರತಿಷ್ಠಾ ಪೂವಾರ್ಂಗ ಹವನಗಳು, ಶ್ರೀಸೂಕ್ತಹವನ, ಪುರುಷಸೂಕ್ತ ಹವನ, 'ವನ, ನಾಗದೇವತಾಹವನ ನಾಗದೇವತಾಹವನ ಇತ್ಯಾದಿ, ಇ

ಸಾಯಂಕಾಲ: ಶಿಖರ, ಕಲಶಕ್ಕೆ ಅಧಿವಾಸಗಳು, ಅಸ್ತಜಪ, ಸ್ಪಪನಕಲಶ, ಮಂಡಲರಚನೆ ಇತ್ಯಾದಿ

ಫಾಲ್ಗುಣ ಶುದ್ಧ ತೃತೀಯ ಭಾನುವಾರ ದಿನಾಂಕ : 2/3/2025

ಪ್ರಾತಃ ಗಣೇಶ ಪೂಜಾ, ಪುಣ್ಯಾಹ, ಕಲಶಪೂಜಾ, ಪ್ರತಿಷ್ಠಾ ಹವನಗಳು, ಶ್ರೀ ಸೋಂದಾ ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರ್ಣವಲ್ಲೀ ಮಠ ಇವರ ಅಮೃತ ಹಸ್ತದಿಂದ 11-48 ಕ್ಕೆ ಸಲ್ಲುವ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ಅಷ್ಟಬಂಧ. ಪುನಃ ಪ್ರತಿಷ್ಠಾಪನೆ, ಧ್ವಜ ಸ್ಥಾಪನೆ, ಬ್ರಹ್ಮಣಸ್ಪತಿ ಸೂಕ್ತ ಹವನ, ಶ್ರೀಗಳ ಅಮೃತಹಸ್ತದಿಂದ ಪೂರ್ಣಾಹುತಿ, ಕಲಾವೃದ್ಧಿ ಹವನ, ಪ್ರಾಣಪ್ರತಿಷ್ಠಾ ಹವನ, ಧ್ವಜಾರೋಹಣ ಇತ್ಯಾದಿ.
ಸಾಯಂಕಾಲ: ಶಾಂತಿ ಪಾಠ, ಷಡಧ್ವನ್ಯಾಸ, ಪರಿವಾರ ಬಲಿ, ಸ್ನಪನಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ.
ಫಾಲ್ಗುಣ ಶುದ್ಧ ಚತುರ್ಥಿ ಸೋಮವಾರ ದಿನಾಂಕ : 3/3/2025

ಪ್ರಾತಃ ಗಣೇಶ ಪೂಜಾ, ಪುಣ್ಯಾಹ, ಬ್ರಹ್ಮಕಲಶಾಭಿಷೇಕ, ಅಧಿವಾಸ ಹವನ, ಪ್ರತಿಷ್ಠಾ ಉತ್ತರಾಂಗ ಹವನಗಳು, ಶತರುದ್ರ ಹವನ, ಚತುದ್ರ್ರವ್ಯಾತ್ಮಕ ಗಣಪತಿ ಅಥರ್ವಶೀರ್ಷ ಹವನ, ಪೂರ್ಣಾಹುತಿ, ಪೂರ್ಣಕಲಾಸಾನ್ನಿಧ್ಯ ಕಲಶಾಭಿಷೇಕ, ಉತ್ಸವಬಲಿ, ಮಹಾಪೂಜೆ, ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ, ಆರ್ಶೀಗ್ರಹಣ, ವಿಪ್ರಾಶೀರ್ವಾದ.
ಪ್ರತಿಕ್ರಿಯೆ

Post a Comment

0 Comments