Hot Posts

6/recent/ticker-posts

ಡಿ.7 ಶನಿವಾರ ಕೊಳಗಿಬೀಸ್ ನಲ್ಲಿ ಆಟ, ಚಿಂಚಳಿಕೆಯಲ್ಲಿ ನಾಟಕ

ಡಿ. 7 ಶನಿವಾರ ಕೊಳಗಿಬೀಸ್ ನಲ್ಲಿ ಆಟ, ಚಿಂಚಳಿಕೆಯಲ್ಲಿ ನಾಟಕ

ಕೊಳಗಿಬೀಸ್ ಯಕ್ಷಗಾನ 

    

ಶಿರಸಿ: ಶ್ರೀ ಮಾರುತಿ ದೇವಸ್ಥಾನ ಕೊಳಗಿಬೀಸ್ ನಲ್ಲಿ ಚಂಪಾ ಷಷ್ಠೀ ನಿಮಿತ್ತ ಹಿಲ್ಲೂರು ಯಕ್ಷ ಮಿತ್ರ ಬಳಗ ಇವರಿಂದ ಹಟ್ಟಿ ಅಂಗಡಿ ರಾಮಭಟ್ಟ ವಿರಚಿತ ಯಕ್ಷಗಾನ ಆಖ್ಯಾನ ಶರಸೇತು ಬಂಧನ ಮತ್ತು ಸುಭದ್ರಾ ಕಲ್ಯಾಣ ದೇವಸ್ಥಾನದ ಆವಾರದಲ್ಲಿ ರಾತ್ರಿ 9:30ಕ್ಕೆ ಯಕ್ಷಗಾನ ಪ್ರದರ್ಶನ ಇದೆ. ಹಿಮ್ಮೇಳದಲ್ಲಿ ಭಾಗವತರು ರಾಮಕೃಷ್ಣ ಹೆಗಡೆ,ಹಿಲ್ಲೂರು ಶ್ರೀಪಾದ ಹೆಗಡೆ, ಬಾಳೇಗದ್ದೆ ಮದ್ದಲೆ ಅನಿರುದ್ಧ ಹೆಗಡೆ ವರ್ಗಾಸರ ಚಂಡೆ ಗಜಾನನ ಸಾಂತೂರು ಹಾಸ್ಯ ಶ್ರೀಧರ ಹೆಗಡೆ, ಚಪ್ಪರಮನೆ ಇರಲಿದ್ದಾರೆ 

ಮೂಮ್ಮೆಳದಲ್ಲಿ ಕೃಷ್ಣಯಾಜಿ ಬಳ್ಳೂರು ಗೋಪಾಲ ಆಚಾರ್ಯ ತೀರ್ಥಹಳ್ಳಿ ಸಂಜಯ ಬಿಳಿಯೂರು ನಾಗೇಶ ಕುಳಿಮನೆ ಮಂಜುನಾಥ ಹೆಗಡೆ ಹಿಲ್ಲೂರು ದೀಪಕ ಕುಂಕಿ ನಿತಿನ ದಂಟಕಲ್ ಪ್ರದರ್ಶನ ನೀಡಲಿದ್ದಾರೆ. 

ಚಿಂಚಳಿಕೆ ನಾಟಕ

  
ಶಿರಸಿ: ಶ್ರೀ ಅಶ್ವತ್ಥನಾರಾಯಣ ದೇವರ ಮತ್ತು ಶ್ರೀ ಅಮ್ಮನವರ ದೇವರ ದೀಪೋತ್ಸವದ ಅಂಗವಾಗಿ ಶ್ರೀ ಅಶ್ವತ್ಥನಾರಾಯಣ ಮತ್ತು ಶ್ರೀ ಮಹಾಸತಿ ಟ್ರಸ್ಟ್ (ರಿ.) ಚಿಂಚಳಿಕೆ ಇವರು ಶಿರಸಿ ತಾಲೂಕ ಹೆಗಡೆಕಟ್ಟಾ-ಚಿಂಚಳಿಕೆಯಲ್ಲಿ ನಿರ್ಮಿಸಿದ ಭವ್ಯ ರಂಗಮಂದಿರದಲ್ಲಿ ರಾತ್ರಿ 9-00ಕ್ಕೆ ಸರಿಯಾಗಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಊರ ಮಕ್ಕಳಿಂದ 'ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 10-30ರಿಂದ ಸುಬ್ರಾಯ ಹೆಗಡೆ, ಕಲ್ಲರೆಗದ್ದೆ ಮತ್ತು ವಿ.ಎನ್.ಹೆಗಡೆ, ಕಾನಳ್ಳಿ ಇವರಿಂದ ನಿರ್ದೇಶಿಸಲ್ಪಟ್ಟ ಸಾಮಾಜಿಕ, ಸುಂದರ, ಹಾಸ್ಯಭರಿತ ನಾಟಕ “ಧರ್ಮದ ಮನೆಯಲ್ಲಿ ಕರ್ಮದಾಟ”ಅರ್ಥಾತ್ “ದುಷ್ಟರ ದರ್ಬಾರ” ಎಂಬ ಸುಂದರ ಸಾಮಾಜಿಕ, ಹೃದಯಸ್ಪರ್ಶಿ, ಹಾಸ್ಯ ಭರಿತ ನಾಟಕವನ್ನು ಅಭಿನಯಿಸಲಿದ್ದಾರೆ. ನಿರೂಪಣೆಯನ್ನು ಬಿ. ಜಿ. ಹೆಗಡೆ, ಕೊಡೆಮನೆ ಮಾಡಲಿದ್ದಾರೆ.

ಶಿರಸಿ ನಿಲೇಕಣಿ ಶ್ರೀ ಸುಬ್ರಹ್ಮಣ್ಯ ದೇವರ ತೇರು ಕೂಡ ಡಿಸೆಂಬರ್ 7 ಶನಿವಾರ ನಡೆಯಲಿದೆ 

ಪ್ರತಿಕ್ರಿಯೆ

Post a Comment

0 Comments