ಕೆಲವೊಂದು ಉತ್ಪನ್ನಗಳು ಬಹಳ ಆಶ್ಚರ್ಯ ಅನ್ನಿಸುತ್ತದೆ. ಯಾವುದರಿಂದ ಮಾಡಿದ್ದು ಅನ್ನುವ ಕುತೂಹಲ ಕೂಡ ಬರುತ್ತದೆ. ಧಾರವಾಡ ಕೃಷಿ ಮೇಳ ರೈತರ ಜಾತ್ರೆ ಎಂದೇ ಕರೆಸಿಕೊಂಡಿದೆ. ಪ್ರತಿವರ್ಷದ ಕೃಷಿ ಮೇಳಕ್ಕೆ ಲಕ್ಷ ಲಕ್ಷ ರೈತರು ಬಂದು ಹೋಗುತ್ತಾರೆ. ಇಲ್ಲಿ ಬರುವ ಸ್ಟಾಲ್ ವೈವಿಧ್ಯಮಯವಾಗಿರುತ್ತದೆ. ಬೇರೆ ಬೇರೆ ಬಗ್ಗೆ ಉತ್ಪನ್ನಗಳು ರೈತರ ಗಮನ ಸೆಳೆಯುವುದು ಸುಳ್ಳಲ್ಲ. ಕೆಲವು ಪರಿಸರ ಸ್ನೇಹ ಉತ್ಪನ್ನಗಳು ನಿಜಕ್ಕೂ ಅಪರೂಪದ ಸಂಗತಿಗಳೇ. ಯಾಕೆಂದರೆ ಇಂತಹ ಉತ್ಪನ್ನಗಳು ಈಗ ಮಾಯವಾಗುತ್ತಿವೆ. ನಾವಿಲ್ಲಿ ಹೇಳಲು ಹೊರಟಿರುವುದು ಊಹಿಸಲೂ ಸಾಧ್ಯವಾಗದ ವಿಚಾರ.
ಇಲ್ಲಿರುವ ಗಣಪತಿಯ ಮೂರ್ತಿ, ಇಲ್ಲಿರುವ ಈಶ್ವರ ಲಿಂಗ, ಯಾವುದರಿಂದ ಮಾಡಿದ್ದು ಎಂದು ಕೇಳಿದರೆ ಬಹಳಷ್ಟು ಜನರು ತಪ್ಪು ಉತ್ತರವನ್ನೇ ಹೇಳಬಹುದು. ಈ ಬಾರಿಯ 2024ರ ಕೃಷಿ ಮೇಳದಲ್ಲಿ ಒಂದು ಪುಟ್ಟ ಸ್ಟಾಲ್ ಇತ್ತು ಅಲ್ಲೇ ಒಂದು ಅಪರೂಪದ ವಸ್ತು ಇತ್ತು. ಯಾರು ಅಷ್ಟಾಗಿ ಗಮನಿಸಲಿಲ್ಲ. ಆದರೆ ನಾವು ಗಮನಿಸಿದ್ದೆವು. ಇಲ್ಲಿರುವ ಗಣಪತಿಯ ಮೂರ್ತಿ, ಇಲ್ಲಿರುವ ಈಶ್ವರ ಲಿಂಗ, ಗೋವಿನ ಸೆಗಣಿ ಯಿಂದ ಮಾಡಲಾಗಿತ್ತು. ಇದೊಂದು ಪುಟ್ಟ ಪುಟ್ಟ ಮೂರ್ತಿಯಾಗಿರುವುದರಿಂದ ಬಹುತೇಕರ ಗಮನಕ್ಕೆ ಹೋಗಿರಲಿಲ್ಲ. ಇಂತಹ ಅಪರೂಪದ ವಸ್ತುಗಳಿಗೆ ಇದರ ತಯಾರಿಕರಿಗೆ ಪ್ರೋತ್ಸಾಹ ನೀಡೋಣ. ಗೋವಿನ ಬಗ್ಗೆ ಹಿಂದು ಧರ್ಮದಲ್ಲಿ ಅಪಾರವಾದಂತಹ ಒಂದು ಗೌರವವಿದೆ. ಇದರ ಉತ್ಪನ್ನಗಳು ಔಷಧಿಯ ಗುಣವನ್ನು ಹೊಂದಿದೆ. ಆದರೆ ಅಲಂಕಾರಿಕವಾಗಿ ಬಳಸಬಹುದು ಪೂಜೆಗಾಗಿ ಕೂಡ ಬಳಸಬಹುದು ಎನ್ನುವುದು ಇದರಿಂದ ತಿಳಿಯುತ್ತದೆ. ಜೈ ಗೋ ಮಾತಾ.
0 Comments