Hot Posts

6/recent/ticker-posts

ದಿನದ ಸುದ್ದಿ: 3 ಜುಲೈ 2024

                ಈ ದಿನದ ಓದಲು ಇರುವ ಸುದ್ದಿ 4

ಸುದ್ದಿ1 ವಿಶ್ವ ದಾಖಲೆ ಸೇರಿದ ತುಳಸಿ ಹೆಗಡೆ:

    

ಶಿರಸಿ: ಅತ್ಯಂತ‌ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ. 

ಲಂಡನ್ ಮೂಲದ ಪ್ರತಿಷ್ಠಿತ ವಲ್ಡ್ ೯ ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ‌ ಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ ೯ ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.

ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತು ಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ‌ ದಾಖಲಾತಿ ಪಟ್ಟಿಗೆ ಸೇರ್ಪಡೆ ಆಗಿರಲಿಲ್ಲ ಎಂದು ಈ ಸಂಸ್ಥೆ ತಿಳಿಸಿದೆ.

ಸುದ್ದಿ 2 ಸ್ವರ್ಣವಲ್ಲಿಯಲ್ಲಿ ಶ್ರೀ ಕೃಷ್ಣ ಯಜುರ್ವೇದಪಾದ ಘನಪಾರಾಯಣ ಸತ್ರ

          

ರಾಷ್ಟ್ರಮಟ್ಟದ ವೇದವಿದ್ವಾಂಸರಿಂದ ಶ್ರೀ ಕೃಷ್ಣಯಜುರ್ವೇದ ಪಾದಘನಪಾರಾಯಣ ಸತ್ರ 08-07-2024) ಸೋಮವಾರದಿಂದ (15-07-2024) ಸೋಮವಾರ ಸ್ಥಳ: ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ

ಸುದ್ದಿ 3 ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಉಚಿತ ತರಬೇತಿ:

ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತು 30 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್ 21 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ 9740982585, 9380162042 ಸಂಪರ್ಕಿಸಬಹುದು

ಸುದ್ದಿ 4 ಚಿಂತಕರ ಚಾವಡಿಯಿಂದ "ಆಡುಭಾಷಾ ಕವಿಗೋಷ್ಠಿ:

ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ಆಶ್ರಯದಲ್ಲಿ ದಿನಾಂಕ 7-7-2024, ರವಿವಾರದಂದು, ಮಧ್ಯಾಹ್ನ 3 ಘಂಟೆಗೆ, ಶಿರಸಿಯ ನೆಮ್ಮದಿ ಕುಟೀರದಲ್ಲಿ "ಆಡುಭಾಷಾ ಕವಿಗೋಷ್ಠಿ' ಆಯೋಜಿಸಲಾಗಿದೆ. ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಹಿರಿಯ ಸಾಹಿತಿ ಎಸ್ ಎಸ್ ಭಟ್ ಅಧ್ಯಕ್ಷತೆ ವಹಿಸುವರು. 

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಜಗದೀಶ ಭಂಡಾರಿಯವರು ಸಮಾರಂಭವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಎಮ್ ಎಸ್ ಹೆಗಡೆ, ಕಥೆಗಾರ ರಾಜೂ ಉಗ್ರಾಣಕರ, ವನಸ್ಪದಿ ವೈದ್ಯ ಸಾಹಿತಿ ಮಂಜುನಾಥ ಹೆಗಡೆ ಹೂಡ್ಲಮನೆ, ಚುಟುಕು ಕವಿ ದತ್ತಗುರು ಕಂಠಿ ಮತ್ತು ಬರಹಗಾರ ದಿವಸ್ಪತಿ ಭಟ್, ಬೆಂಗಳೂರು ಇವರುಗಳು ಉಪಸ್ಥಿತರಿರುವರು 

"ಆಡು ಭಾಷಾ ಕವಿಗೋಷ್ಠಿ"ಯಲ್ಲಿ ಆಕರ್ಷಣೀಯವಾಗಿ ಕವನ ವಾಚನ ಮಾಡಿದ ಮೂವರಿಗೆ ಬಹುಮಾನ ನೀಡಲಾಗುವುದು ಮತ್ತು ಕವಿತೆ ವಾಚಿಸಿದ ಕವಿ ಕವಯತ್ರಿಯರಿಗೆಲ್ಲ ಅಭಿನಂದನಾ ಪತ್ರ ವಿತರಿಸಲಾಗುವುದು. ಆಡುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ದಾಕ್ಷಾಯಿಣಿ ಪಿ.ಸಿ ವಹಿಸುವರು. ನಿರ್ಣಾಯಕರಾಗಿ ಶೋಭಾ ಭಟ್ ಮತ್ತು ರೋಹಿಣಿ ಹೆಗಡೆ ಭಾಗವಹಿಸಿವರು. ತಂತಮ್ಮ ಆಡುಭಾಷೆಯಲ್ಲಿ ಕವಿತೆ ವಾಚಿಸಲಿರುವ ಕವಿಗಳು ಹೆಸರನ್ನು (ದತ್ತಗುರು ಕಂಠಿ - 9483648230. ಅಥವಾ ಯಶಸ್ವಿನಿಮೂರ್ತಿ - 9980673582) ನೊಂದಾಯಿಸಬಹುದು, ಎಂದು ಸಂಘಟಕರು ತಿಳಿಸಿದ್ದಾರೆ.

ಶಿರಸಿಯಲ್ಲಿ ಅತ್ಯಧಿಕ ಪ್ರಸಾರದಲ್ಲಿ ನಮಸ್ತೆ ಶಿರಸಿ ಸುದ್ದಿ ಮತ್ತು ಜಾಹೀರಾತು ನೀಡಲು WhatsApp 7676467131 

ಪ್ರತಿಕ್ರಿಯೆ

Post a Comment

0 Comments