ಶಿರಸಿ: ಮಾರಿಗುಡಿ ಹಿಂಭಾಗದ ಸಾಯಿ ಮಂದಿರ ಸಮೀಪದ ನಿವಾಸಿಗಳಾದ ಹುಲೇಕಲ್ ಮೂಲದ ವಿಠಲ ಶೆಟ್ ಹಾಗೂ ಜಯಂತಿ ದಿನೇಶ ಶೇಟ್ ಅವರ ಕಾರು ರಾಣಿಬೆನ್ನೂರು ಸಮೀಪ ಮರಕ್ಕೆ ಡಿಕ್ಕಿಯಾಗಿದೆ. ಇಬ್ಬರೂ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ. ಅವರು ಬೆಂಗಳೂರಿನಿಂದ ಕಾರಿನ ಮೂಲಕ ಶಿರಸಿಗೆ ಆಗಮಿಸುತ್ತಿದ್ದರು ಎನ್ನಲಾಗಿದೆ ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಹುಣಸೆ ಮರಕ್ಕೆ ಡಿಕ್ಕಿಯಾಯಿತು ಎನ್ನಲಾಗಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
0 Comments