ಅಡಿಕೆ ಬೆಳೆ ಬೆಳೆಯುವ ಸಂದರ್ಭದಲ್ಲಿ ಸಿಗುವ ಉಪ ಉತ್ಪನ್ನಗಳು ಬಳಕೆಗೆ ಬರುವಂತಾದಲ್ಲಿ ಅಡಿಕೆ ಬೆಳೆಗಾರರ ಆರ್ಥಿಕತೆ ವೃದ್ದಿಸುವುದರಲ್ಲಿ ಸಂಶಯವಿಲ್ಲ. ಅಡಿಕೆಯ ಉಪ ಉತ್ಪನ್ನಗಳ ಮೌಲ್ಯವರ್ಧನೆ ಆಗುತ್ತಿದೆ ಎಂಬ ಮಾತನ್ನು ಬಹಳಷ್ಟು ಕಡೆ ನಾವು ಕೇಳುತ್ತೇವೆ. ಅಡಿಕೆ ಹಾಳೆಯಿಂದ ತಟ್ಟೆ, ಲೋಟ, ಪ್ಲೇಟ್ ಯಾರಾಗಿ ಪರಿಸರ ಸ್ನೇಹಿ ಮದುವೆ ಮುoಜಿ ಸಮಾರಂಭಗಳಿಗೆ ನೆರವಾಗುತ್ತಿದೆ. ಇತ್ತೀಚೆಗೆ ನಾವು ಕೇಳುತ್ತಿರುವ ಮತ್ತೊಂದು ವಿಚಾರ ಅಡಿಕೆಯ ಚೊಗರಿದ (ತೊಗರು) ಬಣ್ಣ ಬಟ್ಟೆಗೆ ಹಾಕಲಾಗುತ್ತಿದೆ ಎಂದು.
ಖಾದಿ ಬಟ್ಟೆಗೆ ಮೆರಗು ತಂದ ಅಡಿಕೆ ಚೊಗರು. ಸಾಗರ ಹೆಗ್ಗೋಡು ಬಳಿಯ ಭೀಮನಕೋಣೆ ಚರಕ ಸಂಸ್ಥೆ ಶರ್ಟ್ ಮತ್ತು ಸಾರಿಗೆ ಅಡಿಕೆ ಚೊಗರಿನ ಬಣ್ಣ ಹಾಕಿ ಮೆರಗು ತಂದಿದೆ.
ಅತ್ಯಂತ ಆಕರ್ಷಕವಾಗಿ ಕಂಡುಬರುತ್ತದೆ. ಯಾವ ಕೃತ್ರಿಮ ಬಣ್ಣಗಳಿಗೆ ಕಡಿಮೆ ಇಲ್ಲ ಆದರೆ ಇದು ಫುಲ್ ನ್ಯಾಚುರಲ್, ಮೈಗೆ ಹಾಕಲು ಆಕರ್ಷಕ ಜೊತೆಗೆ ಆರಾಮದಾಯಕ ಕೂಡ ಹೌದು. ಅಡಿಕೆ ಚೊಗರಿನ ಬಣ್ಣ ಹಾಕಿರುವ ಶರ್ಟ್ ₹700 ರಿಂದ 950 ರವರೆಗೆ ಸೀರೆ ₹900 ಮೇಲ್ಪಟ್ಟು ಮಾರಾಟವಾಗುತ್ತಿದೆ. ಇದರಲ್ಲಿಯೇ ತಿಳಿ ಮತ್ತು ಅಚ್ಚು ಬಣ್ಣದ ಶರ್ಟ್ ವಿಧಗಳಿವೆ.
0 Comments