ಶಿರಸಿ ಬಳಿಯ ದೊಡ್ನಳ್ಳಿಯ ಪಾಲಿಶ್ ರಹಿತ ಕೆಂಪು ಅಕ್ಕಿ ಮತ್ತು ಬೆಲ್ಲ ದಿನೇ ದಿನೇ ರೈತ ವಲಯದಲ್ಲಿ ಮತ್ತು ಗ್ರಾಹಕರಲ್ಲಿ ಗಮನಸೆಳೆಯುತ್ತಿದೆ. ರೈತ ಉತ್ಪಾದಕರ ಸಂಸ್ಥೆಯಾದ ದೊಡ್ನಳ್ಳಿ ಶಂಭುಲಿಂಗೇಶ್ವರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ರೈತರ ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ.
ಎಲ್ಲರೂ ಬಳಸುತ್ತಾರೆ ಮಧುಮೇಹಿಗಳಿಗಂತೂ ಬಹಳ ಉಪಯುಕ್ತ
ರೈತರಿಂದ ನೇರವಾಗಿ ಬಳಕೆದಾರರಿಗೆ ತಲುಪವುದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ದೊಡ್ನಳ್ಳಿ ಅಕ್ಕಿ ಹೇರಳವಾದ ನಾರಿನ ಅಂಶ ಹೊಂದಿದ್ದು, ಹೊಟ್ಟೆಯಲ್ಲಿನ ಅನೇಕ ಸಮಸ್ಯೆಯ ಪರಿಹಾರಕ್ಕೆ ಸಹಕಾರಿ. ನಿಧಾನವಾಗಿ ಜೀರ್ಣವಾಗುವದರಿಂದ ಸಿಹಿ ಮೂತ್ರ (ಡಯಾಬಿಟೆಕ್) ರೋಗಿಗಳಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಾಗಿರುತ್ತದೆ. ಹೆಚ್ಚಿನ ಪ್ರೋಟೀನ್ ಹಾಗೂ ವಿಟಮಿನ್ ಹೊಂದಿರುವುದರಿಂದ ಅಪೌಷ್ಠಿಕತೆ ಸಹಕಾರಿಯಾಗಿದೆ. ಪಾಲಿಶ್ ಮಾಡಿದ ಅಕ್ಕಿ ರುಚಿ ಇಲ್ಲ, ಊಟ ಮಾಡಿದ ನಂತರ ಏನೋ ಅರಿಯದ ಸಮಸ್ಯೆ ಎನ್ನುವವರು ಈ ಅಕ್ಕಿ ಆಯ್ದುಕೊಳ್ಳಬಹುದು.
ಪರಿಮಳ ಭರಿತ ಕೋಣನ ಕಟ್ಟೆ ಬೆಲ್ಲ
ಅಕ್ಕಿಯ ಜೊತೆ ಜೊತೆ ಕಬ್ಬು ಬೆಳೆದ ರೈತರಿಗೆ ನೆರವಾಗುತ್ತಿದೆ ಸಂಸ್ಥೆ. ರೈತರು ಉತ್ಪಾದಿಸಿದ ಬೆಲ್ಲವನ್ನು ಗ್ರಾಹಕರಿಗೆ ತಲುಪಿಸುತ್ತಿದೆ. 1ಕೆಜಿ ಬಾಟಲ್ 5 ಕೆಜಿ ಬಾಟಲ್ 24 ಕೆಜಿ ಡಬ್ಬ ಗಳಲ್ಲಿ ಬೆಲ್ಲ ಬರುತ್ತಿದ್ದು ತಾಜಾ ಮತ್ತು ಗಟ್ಟಿಯಾದ ಬೆಲ್ಲ ಇರುವ ಕಾರಣಕ್ಕಾಗಿ ಗ್ರಾಹಕರು ಹೆಚ್ಚು ಇಷ್ಟಪಡುತ್ತಿದ್ದಾರೆ.
ಜನರಿಗೇಕೆ ಪ್ರೀತಿ?
ಬಹುತೇಕರು ತಮ್ಮ ಆರೋಗ್ಯದ ಕಾಳಜಿಯ ಸಲುವಾಗಿ ಈ ಅಕ್ಕಿ ಮತ್ತು ಬೆಲ್ಲ ಬಳಸುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಕ್ಕರೆ ಅಂಶವನ್ನು ನಿಯಂತ್ರಿಸಲು ಅಕ್ಕಿ ಯನ್ನು ಮಧುಮೇಹಿಗಳು ಬಳಸುತ್ತಿದ್ದಾರೆ. ಎಲ್ಲಾ ಟಾನಿಕ್ ಇದರಲ್ಲಿಯೇ ಹೆಚ್ಚಿನ ಪ್ರೋಟೀನ್ ಹಾಗೂ ವಿಟಮಿನ್ ಹೊಂದಿರುವುದರಿಂದ ಅಪೌಷ್ಟಿಕತೆ ನಿವಾರಣೆಗೆ ಅತ್ಯುತ್ತಮ ಎನ್ನುತ್ತಾರೆ ಈಗಾಗಲೇ ಬಳಸುತ್ತಿರುವವರು.
ರಾಸಾಯನಿಕ ಕೀಟನಾಶಕ ಬಳಕೆ ಇಲ್ಲ
ರಾಸಾಯನಿಕ ಕೀಟನಾಶಕ ಬಳಕೆ ಆಗದೇ ಇರುವುದು ಅಕ್ಕಿಯ ವಿಶೇಷ. ನಿಮ್ಮ ಆರೋಗ್ಯದ ರಕ್ಷಣೆಗೆ ನೀವು ಮಹತ್ವ ನೀಡುವುದು ಇಂದಿನ ಅಗತ್ಯ ಅದಕ್ಕಾಗಿ ಉತ್ತಮವಾದುದನ್ನೆ ಆಯ್ದುಕೊಳ್ಳಿ ಎನ್ನುತ್ತಾರೆ ಮುಖ್ಯ ಕಾರ್ಯನಿರ್ವಾಹಕ ರವಿ ನಾಯ್ಕ. ಮತ್ತಷ್ಟು ಮಾಹಿತಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ರವಿ ನಾಯ್ಕ ಅವರನ್ನು ಸಂಪರ್ಕಿಸಬಹುದು 8431306298 & 9482007482
ದೊಡ್ನಳ್ಳಿ ಅಕ್ಕಿ ಮತ್ತು ಬೆಲ್ಲ ಲಭ್ಯ ಇರುವ ಸ್ಥಳಗಳ ಪಟ್ಟಿ ಇಲ್ಲಿದೆ
1 ಕದಂಬ ಸೂಪರ್ ಮಾರ್ಕೆಟ್, ಶಿರಸಿ 9480868748
2. ಎಚ್.ಎಸ್.ಎಸ್. ಸೂಪರ್ ಮಾರ್ಕೆಟ್, ಹೆಗಡೆಕಟ್ಟಾ 08283244130
3. ಮಹಾಲಕ್ಷ್ಮೀ ಸೂಪರ್ ಮಾರ್ಕೆಟ್, ಕಾರವಾರ 9807509807
4. ಶ್ರೀದೇವಿ ಸ್ಟೋರ್, ಮುರ್ಡೇಶ್ವರ 9036227219
5. ಎಸ್.ಡಿ.ಪಿ. ಸೂಪರ್ ಮಾರ್ಕೆಟ್, ಶಿರಾಲಿ (ಭಟ್ಕಳ) 8277793009
6. ಹಾವೇರಿ 8660958561
7. ಪ್ರಕಾಶ ಜನರಲ್ ಸ್ಟೋರ್, ಹಳದಿಪುರ 8431675053
8. ಪ್ರೇಯಿ ಮುರ್ಡೇಶ್ವರ (ಕಾಮತ್ ಹೊಟೆಲ್)
0 Comments