ಮಾತಿನಲ್ಲಿ ಕಡಿಮೆಯಲ್ಲ ಇವರು, ಜಾತ್ರೆಯ ಅಂಗಡಿಗಳ ಸಾಲಿನಲ್ಲಿ ಭಿನ್ನವಾಗಿ ಕಾಣುವ ಇವರು, ಹೀಗೊಂದು ವಿಶೇಷ ವ್ಯಕ್ತಿತ್ವದ ಸುತ್ತ ಇದೆ ಹಂಸ ಈ ಲೇಖನ. ಶಿವರಾತ್ರಿಯ ಹಬ್ಬದ ಆಚರಣೆಗೆಂದು ಸಹಸ್ರಲಿಂಗಕ್ಕೆ ಸಾಗುತ್ತಿದ್ದಾಗ ಅಂಗಡಿಗಳ ಸಾಲಿನಲ್ಲಿ ಒಂದು ದೊಡ್ಡ ಕಟೌಟ್ ಹಾಕಿಕೊಂಡು ತಂಪು ನೀರಿನ ಉಚಿತ ಸೇವೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಕಡೆ ನಮ್ಮ ಗಮನ ಹರಿಯಿತು. ಆ ದೊಡ್ಡ ಕಟೌಟ್ ನಲ್ಲಿ ಅವರ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು, ಅವರನ್ನು ಸನ್ಮಾನಿಸಿದ ಚಿತ್ರಗಳು ಇದ್ದವು. ಅದನ್ನು ಗಮನಿಸಿ ಒಮ್ಮೆ ಇವರನ್ನು ಮಾತನಾಡಿಸಿಯೇ ಬಿಡೋಣ ಎನಿಸಿತು.
ವ್ಯಾಪಾರಕ್ಕಾಗಿ ನಿಂತವರ ಸಾಲಿನಲ್ಲಿ ಇವರೇನೋ ವಿಭಿನ್ನ ಅನಿಸಿದ್ದು ಸುಳ್ಳಲ್ಲ. "ಆಯಾಸಕ್ಕಾಗಿ ವಿಶ್ರಾಂತಿ ಬಾಯಾರಿಕೆಯಾಗಿ ನೀರು ನೀರಿಗಾಗಿ ನಾನು" ! ಹೀಗೊಂದು ಸ್ಲೋಗನ್ ಹಾಕಿದ್ದು ಕಟೌಟ್ ಮೇಲೆ ಅಷ್ಟೇ ಅಲ್ಲ ಅವರ ಟೀ-ಶರ್ಟ್ ಮೇಲೆ ಕೂಡ ಕಂಡುಬಂತು. ಊರಿನ ಜಾತ್ರೆ ಯಾದಾಗ ಆ ಊರಿನವರು ಬರುವ ಭಕ್ತಾದಿಗಳಿಗಾಗಿ ಉಚಿತ ನೀರಿನ ಸೇವೆ ಅಥವಾ ಪಾನೀಯ ವ್ಯವಸ್ಥೆ ಮಾಡುವುದು ನೋಡಿದ್ದೇವೆ. ಆದರೆ ಇವರದ್ದು ಹಾಗಲ್ಲ ಯಾವುದೋ ಊರಿನ ಜಾತ್ರೆ ಇರಬಹುದು ಇವರದ್ದು ನೀರಿನ ಉಚಿತ ಸೇವೆ ಇದೆ.
ಇವರು ಸುಬ್ರಾಯ ಮಂಜಾ ನಾಯ್ಕ ಮಂಚಿಕೇರಿ. ಕಳೆದ 9 ವರ್ಷಗಳಿಂದ ಈ ಸೇವೆ ನಡೆಸಿಕೊಂಡು ಬಂದಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾವುದೇ ಸಂಘ-ಸಂಸ್ಥೆಗಳ ಅನುದಾನ ಪಡೆಯದೆ, ನಿರಂತರವಾಗಿ ಸೇವೆ ನಡೆಸುತ್ತಿರುವುದು ಗಮನಾರ್ಹ. ದಾಹ ಆದವರಿಗೆ ಹನಿ ನೀರು ಅಮೃತ ಸಮಾನ, ದಾಹ ತಣಿಸುವ ಸೇವೆ ಮಾಡುತ್ತ ಜನರಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಸುಬ್ರಾಯ. ತಮ್ಮ ವ್ಯಾಪಾರಕ್ಕಾಗಿ ಅಥವಾ ಲಾಭಕ್ಕಾಗಿ ಜಾತ್ರೆಗೆ ಅಂಗಡಿ ಹಾಕುವವರ ನಡುವೆ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಒಂದು ದಿನದ ಕೂಲಿಯನ್ನೂ ಬಿಟ್ಟು ಜಾತ್ರೆ ಸಮಾರಂಭಗಳಿಗೆ ಲಗ್ಗೆ ಇಡುತ್ತಾರೆ ಸುಬ್ರಾಯ ನಾಯ್ಕ. ಮುಂಜಾನೆ ಹಾಜರಿದ್ದು ಮಧ್ಯಾಹ್ನ ಉರಿಬಿಸಿಲಿನ ವೇಳೆಗೆ ಜನರ ದಾಹ ತೀರಿಸುವದು ಇವರ ಕಾಯಕ.
ಏನ್ಮಾಡ್ತಾರೆ ಇವ್ರು??? ವಿಡಿಯೋ ನೋಡಬೇಕಾ? ಕೆಳಗಿರುವ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ
https://youtu.be/oIaIzrJPE9o
ನೀರಿದು ಜೀವಜಲ… ಹಿತ ಮಿತವಾಗಿ ಬಳಸಿ, ಅಂತರ್ಜಲ ಕುಸಿಯುತ್ತಿದ್ದು ಹೆಚ್ಚಿಸಲು ಪ್ರಯತ್ನಿಸಿ ಈ ಬಗೆಯ ಸದಾಶಯ ಹೊಂದಿರುವ ವ್ಯಕ್ತಿ ನಮಗೆ ಅಪರೂಪದ ವ್ಯಕ್ತಿಯಂತೆ ಅನಿಸಿದರು. ಅವರನ್ನು 9481709359 ಮೊಬೈಲ್ ನಂಬರ್ ಮೂಲಕ ಸಂಪರ್ಕಿಸಬಹುದು.
ಏನ್ಮಾಡ್ತಾರೆ ಇವ್ರು??? ವಿಡಿಯೋ ನೋಡಬೇಕಾ? ಕೆಳಗಿರುವ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ
https://youtu.be/oIaIzrJPE9o
0 Comments